SportzGazette

ಜಪಾನ್ ನಲ್ಲಿ ಬಿಡುಗಡೆಯಾಗುತ್ತಿದೆ ಕನ್ನಡದ ಈ ಚಿತ್ರ…! ಯಾವುದು ಗೊತ್ತಾ…?

ಒಂದು ಕ್ಷಣ ನಾಡೊಲುಮೆ ಮರೆತು ವಾಸ್ತವಿಕವಾಗಿ ಯೋಚಿಸಿದರೆ, ದೇಶದ ಮತ್ತಿತರ ಸಿನಿಮಾ ರಂಗಗಳು ತಯಾರಿಸುತ್ತಿರುವ ಸಿನಿಮಾಗಳ ಗುಣಮಟ್ಟಕ್ಕೂ ಕನ್ನಡ ಸಿನಿಮಾಗಳ ಗುಣಮಟಕ್ಕೂ ಎಷ್ಟು ವ್ಯತ್ಯಾಸವಿದೆ ಎಂದು ಅರಿವಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಗುರು ಪ್ರಸಾದ್ ನಿರ್ದೇಶನದ ವಿಡಂಬನಾತ್ಮಕ ಚಿತ್ರ ‘ಎದ್ದೇಳೋ ಮಂಜುನಾಥ’ದಲ್ಲಿ ತಬಲಾ ನಾಣಿ ಅವರು ‘ಅಹಂಗಾಗಿ, ಹಣಕ್ಕಾಗಿ, ಶೋಕಿಗಾಗಿ ಸಿನಿಮಾವನ್ನು ಮಾಡುತ್ತಿದ್ದಾರೆ’ ಎಂಬ ಒಂದು ಡೈಲಾಗ್ ಹೇಳುತ್ತಾರೆ. ಆ ಸಿನಿಮಾ ಬಿಡುಗಡೆಯಾಗಿ ಸುಮಾರು ಹತ್ತು ವರುಷವಾಗಿದೆ. ಆದರೆ ಅಂದಿನ ಕನ್ನಡ ಸಿನಿಮಾಗಳಲ್ಲಿನ ಕತೆ, ಬಳಸುತ್ತಿದ್ದ ತಂತ್ರಜ್ಞಾನಕ್ಕೂ ಇಂದಿನ ಕನ್ನಡ ಸಿನಿಮಾಗಳಲ್ಲಿನ ಕತೆ, ಬಳಸಲಾಗುತ್ತಿರುವ ತಂತ್ರಜ್ಞಾನಕ್ಕೂ ಅಂತಹ ದೊಡ್ಡ ಸುಧಾರಣೆಯೇನು ಕಂಡು ಬರುತ್ತಿಲ್ಲ.

‘ಕೆಜಿಎಫ್’ ಚಿತ್ರದಿಂದಲೇ ಹಲವಾರು ಉತ್ತರ ಭಾರತೀಯರಿಗೆ ಕನ್ನಡದಲ್ಲೂ ಸಿನಿಮಾಗಳು ಬರುತ್ತವೆ ಎಂದು ಗೊತ್ತಾಗಿದ್ದು. ಸದ್ಯಕ್ಕೆ ಕನ್ನಡ ಸಿನಿಮಾಗಳ ಭವಿಷ್ಯ ಪ್ರಶಾಂತ್ ನೀಲ್, ದುನಿಯಾ ಸೂರಿ, ಸಂತೋಷ್ ಆನಂದ್ ರಾಮ್, ರಕ್ಷಿತ್ ಶೆಟ್ಟಿ, ಪವನ್ ಕುಮಾರ್, ರಿಷಬ್ ಶೆಟ್ಟಿ, ರವಿ ಬಸರೂರ್, ಶ್ರೀನಿವಾಸ್, ಯಶ್, ಸುದೀಪ್, ಭುವನ್ ಗೌಡ, ಶ್ರೀಕಾಂತ್ ಮತ್ತು ಇನ್ನು ಕೆಲವು ಕಲಾವಿದರ ಮಡಿಲಲ್ಲಿ ಇದೆ. ಇವರೆಲ್ಲ ಪ್ರಾಮಾಣಿಕವಾಗಿ ಕನ್ನಡ ಸಿನಿಮಾದ ಗುಣಮಟ್ಟವನ್ನು ಹೆಚ್ಚಿಸಲು ದಣಿಯುತ್ತಿರುವುದಕ್ಕೆ ಶ್ಲಾಘಿಸಲೇಬೇಕು.

ಕೆಜಿಎಫ್ ಚಿತ್ರದ ನಂತರ ಕನ್ನಡ ಸಿನಿಮಾಗಳನ್ನು ಕನ್ನಡವರು ಬಿಟ್ಟು ಬೇರೆ ಅವರು ಸ್ವಲ್ಪ ಮಟ್ಟಿಗೆ ಗುರುತಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಈಗ ದರ್ಶನ್ ಅಭಿನಯದ ‘ಕುರುಕ್ಷೇತ್ರ’, ಸುದೀಪ್ ಅಭಿನಯದ ‘ಪೈಲ್ವಾನ್’, ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮಾನ್ ನಾರಾಯಣ’ ಚಿತ್ರಗಳು ಐದು, ಏಳು ಹಾಗು ನಾಲ್ಕು ಬಾಷೆಗಳಲ್ಲಿ ಬಿಡುಗಡೆಯಾಗುತ್ತಿವೆ. ಇದು ಸಹ ಒಂದು ಉತ್ತಮ ಬೆಳವಣಿಗೆ.

ಅದಲ್ಲದೆ ಈ ವರುಷ ಬಿಡುಗಡೆಯಾಗಿರುವ ಏಕೈಕ(ಗುರುತಿಸಿಕೊಂಡಿರುವ) ಯಶಸ್ವಿ ಚಿತ್ರ(ಚಿತ್ರದ ಗುಣಮಟ್ಟದ ಆಧಾರದ ಮೇರೆಗೆ) ‘ಬೆಲ್ ಬಾಟಮ್’ ಈಗ ಜಪಾನ್ ನಲ್ಲೂ, ಅಲ್ಲಿನ ಕನ್ನಡಿಗರನ್ನು ಮನರಂಜಿಸಲು ಸಿದ್ಧವಾಗುತ್ತಿದೆ.

ಈಗಾಗಲೆ ‘ಬೆಲ್ ಬಾಟಂ’ ಸಿನಿಮಾ ಯುಎಸ್ಎ, ಯುಕೆ, ಸಿಂಗಾಪೂರ್ ನಲ್ಲಿರುವ ಕನ್ನಡಿಗರಿಗೆ ಮಸ್ತ್ ಮಜಾ ಕೊಟ್ಟಿದೆ. ಈಗ ಜಪಾನ್ ಗೆ ಲಗ್ಗೆ ಇಡುವುದು ಚಿತ್ರತಂಡಕ್ಕೆ ಸಂತಸದ ವಿಚಾರವಾಗಿದೆ. ಚಿತ್ರ ಈಗಾಗಲೆ ಕಿರುತೆರೆಯಲ್ಲಿ ಪ್ರಸಾರವಾದರು ಸಹ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದೆ.

ಈ ವರ್ಷದ ಬ್ಲಕ್ ಬಾಸ್ಟರ್ ಹಿಟ್ ಸಿನಿಮಾ ಎನಿಸಿಕೊಂಡಿರುವ ‘ಬೆಲ್ ಬಾಟಂ’ ಜಯತೀರ್ಥ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ ಎನ್ನುವುದು ವಿಶೇಷ. ಡಿಟೆಕ್ಟಿವ್ ದಿವಾಕರನಾಗಿ ನಿರ್ದೇಶಕ ರಿಷಭ್ ಶೆಟ್ಟಿ ಕಾಣಿಸಿಕೊಂಡರೆ, ಕುಸುಮ ಪಾತ್ರದಲ್ಲಿ ಹರಿಪ್ರಿಯಾ ಮಿಂಚಿದ್ದಾರೆ. ಚಿತ್ರದ ಕಥೆ, ಸಂಭಾಷಣೆ, ಸಂಗೀತ, ನಟನೆ, ನಿರ್ದೇಶಕ ಈ ಚಿತ್ರ ಈ ಮಟ್ಟಕ್ಕೆ ಯಶಸ್ವಿಯಾಗಲು ಕಾರಣವಾಗಿದೆ.