SportzGazette

ದರ್ಶನ್ ಬಗ್ಗೆ ಕಿಚ್ಚ ಶಾಕಿಂಗ್ ಹೇಳಿಕೆ…!

ವಿಷ್ಣು- ಅಂಬಿ ನಮ್ಮೊಂದಿಗೆ ಇಲದಿದ್ದರೇನು ಅವರ ಜಾಗವನ್ನು ತುಂಬಲು ದರ್ಶನ – ಸುದೀಪ್ ಇರುತ್ತಾರೆ ಎಂದು ನಂಬಿಕೊಂಡಿದ್ದ ಕನ್ನಡ ಸಿನಿ ರಸಿಕರಿಗೆ ದರ್ಶನ್ ರ ಆ ಒಂದು ಟ್ವೀಟ್ ನಿಂದ ಬರಸಿಡಿಲು ಬಡಿದಂತಾಯಿತು.

“ನಾನು ಮತ್ತು ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ. ಕೇವಲ ಕನ್ನಡ ಚಿತ್ರರಂಗಕ್ಕೆ ಕೆಲಸ ಮಾಡುವ ಇಬ್ಬರು ನಟರಷ್ಟೇ” ಎಂದು ದರ್ಶನ್ ಟ್ವೀಟ್ ಮಾಡಿದ್ದರು. ಅಭಿಮಾನಿಗಳು ಇದನ್ನು ನಂಬಲು ತಯಾರಾಗಿರಲಿಲ್ಲ. ದರ್ಶನ್ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರಬಹುದು ಎಂದು ಊಹಿಸಿದ್ದರು. ಆದರೆ ನಂತರ ಅದೇ ಸತ್ಯಾಂಶ ಎಂದು ಸ್ವತಃ ದರ್ಶನ್ ಖಚಿತಪಡಿಸಿದರು. ಈಗಲೂ ಅಭಿಮಾನಿಗಳು ಆ ಆಘಾತದಿಂದ ಹೊರ ಬಂದಿಲ!

ದರ್ಶನ್ ಸ್ಟ್ರೇಟ್ ಫಾರ್ವರ್ಡ್ ಆದರೂ ಒಬ್ಬ ಅಂತರ್ಮುಖಿ ಹಾಗು ಸಂಕೋಚ ಸ್ವಭಾವುಳ್ಳ ವ್ಯಕ್ತಿ ಎಂದು ಅವರ ಸ್ನೇಹಿತರರು/ ಹತ್ತಿರದವರು ಹೇಳುತ್ತಿರುತ್ತಾರೆ. ಆದ್ದ ಕಾರಣ ದರ್ಶನ್ ಇದುವರೆಗೂ ತಮ್ಮ ಮತ್ತು ಸುದೀಪ್ ಅವರ ನಡುವಿನ ಬಿನ್ನಾಬಿಪ್ರಾಯದ ಬಗ್ಗೆ ಮಾತನಾಡಿಲ್ಲ.

ಆದರೆ ಸುದೀಪ್ ಅವರು ಹಲವಾರು ಬಾರಿ ದರ್ಶನ್ ಬಗೆ ಪತ್ರಕರ್ತರ ಪ್ರಶ್ನೆಗೆ ಸಹನೆಯಿಂದ ಉತ್ತರಿಸಿದ್ದಾರೆ. ಇತ್ತೀಚೆಗಷ್ಟೇ ಒಂದು ಸಂದರ್ಶನದಲ್ಲಿ ನೀವು ಮತ್ತು ದರ್ಶನ್ ಅವರು ಒಟ್ಟಿಗೆ ಸಿನಿಮಾ ಮಾಡುತ್ತೀರಾ? ಎಂದು ಕೇಳಿದಾಗ. ಸೂಕ್ತ ಕತೆ ಸಿಕ್ಕರೆ ಖಂಡಿತ ಮಾಡುವೆ, ಎಂದು ಹೇಳಿದ್ದರು.

ಕಿಚ್ಚ ಸುದೀಪ್ ನಟನೆಯ ಬಹು ಕೋಟಿ ವೆಚ್ಡ್ಚದ, ಬಹು ಭಾಷಾ ಹಾಗು ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ಆಗಸ್ಟ್ 9ರಂದು ಬಿಡುಗಡೆಯಾಗಲಿದ್ದು, ಚಿತ್ರ ತಂಡದ ಸದಸ್ಯರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇದೆ ರೀತಿ ಒಂದು ಸಂದರ್ಶನದಲ್ಲಿ, ನಿರೂಪಕರು ದರ್ಶನ್ ಹಾಗು ಸುದೀಪ್ ಸಿಸಿಎಲ್ ನಲ್ಲಿ ಒಟ್ಟಿಗೆ ತೆಗೆಸಿಕೊಂಡಿದ್ದ ಒಂದು ಫೋಟ್ ತೋರಿಸಿ ಅದರ ಬಗ್ಗೆ ತಮ್ಮ ಅಭಿಪ್ರಾಯ ಕೇಳಿದರು. ಆಗ ಕಿಚ್ಚ, ” ಅಲ್ಲಿ ಇರಿವುದು ನಾನು. ಅದು ನನ್ನ ವ್ಯಕ್ತಿತ್ವ. ಯಾರಿಗಾದರೂ ಏನಾದರು ಕೊಟ್ಟಮೇಲೆ ಅದನ್ನು ಕಿತ್ತುಕೊಳ್ಳಲು ನನಗೆ ಬರುವುದಿಲ್ಲ. ಸ್ಥಾನ ಆಗಿರಬಹುದು, ಗೌರವ ಆಗಿರಬಹುದು. ನಾನು ಸಾಯೋ ವರೆಗೂ ಅದನ್ನು ಅಲ್ಲೇ ಇಟ್ಟಿರುತ್ತೇನೆ. ಹಾಗಂತ ನಾನು ಅವರಿಂದ ಅದನ್ನು ಮರಳಿ ನಿರೀಕ್ಷಿಸುತ್ತಿದ್ದೇನೆ ಅಥವಾ ವಾಪಾಸ್ ಬೇಕು, ನಾವು ಹೀಗೆ ಇರಬೇಕು ಹಾಗೆ ಇರಬೇಕು ಅನ್ನುವುದು ನನಗಿಲ್ಲ. ಅವರಿಗೆ ಅದು ಬೇಡ ಅಂದಮೇಲೆ ನನಗು ಅದು ಬೇಡ” ಎಂದು ಹೇಳಿದರು.

 

View this post on Instagram

 

Follow us :@kicchasudeep_cdfc _________________________________ #pailwaan #pailwan #kicchasudeepa #kicchafans #kiccha #kicchasudeepcdfc #kicchasudeep

A post shared by KSCDFC (@kicchasudeep_cdfc) on

ಒಟ್ಟಿನಲ್ಲಿ ಅಭಿಮಾನಿಗಳು ಚಡಪಡಿಸುತ್ತಿರುವಂತೆ ಇವರಿಬ್ಬರು ನಟರು ಒಂದಾದರೆ ಸಾಕು!

Related posts

ಓಂ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ನಿಜವಾದ ರೌಡಿಗಳ ಹಾವಳಿ…!

Deepak Chaubah

ನ್ಯೂಸ್ ಪೇಪರ್ ಪ್ರಿಂಟ್ ಇರುವ ಫ್ಯಾಬ್ರಿಕ್ ಡ್ರೆಸ್ ಲ್ಲಿ ಕಿಟ್ಟಿ ಪಾರ್ಟಿಯರ ಫ್ಯಾಷನ್..!

surjith

ಎಲ್ಲಿರುವೆ ಹರಿಯೇ’ ಕುರುಕ್ಷೇತ್ರದ 3ನೇ ಹಾಡು ರಿಲೀಸ್ !!

Kannada News