SportzGazette

ಕನ್ನಡದ ಈ ನಟನ ಸಾಧನೆಗಳನ್ನು ಕೇಳಿ ದಂಗಾದ ಬಾಲಿವುಡ್ ತಾರೆಯರು…!

ಪಕ್ಕದ ಮನೆ ಒಬ್ಬಟ್ಟು ಯಾವತ್ತೂ ನಮ ಮನೆಯ ಒಬ್ಬಟ್ಟಿನಿಂಗಿಂತಲೂ ಹೆಚ್ಚು ಸಿಹಿ ಅನಿಸುತ್ತದೆ ಎಂಬಂತೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಮಹೋತ್ತರ ಸಾಧನೆಗಳನ್ನು ಮಾಡಿದವರು ಇದ್ದರೂ, ನಾವು ಪರ ಭಾಷಾ ಸಾಧಕರನ್ನು ಹಾಡಿ ಹೊಗಳುತ್ತಿರುತ್ತೇವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಹಲವಾರು unsung hero ಗಳು ಇದ್ದಾರೆ. ಅವರ ಪೈಕಿ ಹಿರಿಯ ನಟ ದತ್ತಾತ್ರೇಯ ಅವರು ಒಬ್ಬರು.

ದತ್ತಾತ್ರೇಯ ಎಂದರೆ ತಕ್ಷಣಕ್ಕೆ ನಿಮಗೆ ನೆನಪಾಗದಿರಬಹುದು. ಆದರೆ ದತ್ತಣ್ಣ ಎಂದರೆ ನಿಮ್ಮ ಮುಖದಲ್ಲಿ ಒಂದು ನಗು ಹರಡುತ್ತದೆ. ತಮ್ಮ 45ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಈ ಬಹುಮುಖ ಪ್ರತಿಭೆ ಹಲವಾರು ರೀತಿಯ ಪಾತ್ರದಲ್ಲಿ ನಟಿಸಿದ್ದು, ತಾವು ನಟಿಸುವ ಪಾತ್ರ ಎಷ್ಟೇ ಸಣ್ಣದಾಗಿರಲಿ, ಅದರಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಚಿತ್ರಕ್ಕೆ ಶಕ್ತಿ ತುಂಬುತ್ತಾರೆ. ಇವರ ಬಗ್ಗೆ ಸಾಮಾನ್ಯ ಜನರಿಗೆ ಅರಿವಿದ್ದ ಮಾಹಿತಿ ಇಷ್ಟೇ. ಆದರೆ ಬಾಲಿವುಡ್ ನಟ ಅಕ್ಷಯ ಕುಮಾರ ಅಭಿನಯದ ‘ಮಿಶಿನ್ ಮಂಗಲ್’ ಚಿತ್ರದಲ್ಲಿ ದತ್ತಣ್ಣ ಅವರು ಪ್ರಮುಖ ಪತ್ರವೊಂದನ್ನು ವಹಿಸಿದ್ದು, ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ದತ್ತಣ್ಣ ಅವರ ಜೀವನ ಸಾಧನೆಯನ್ನು ಅಕ್ಷಯ್ ಕುಮಾರ್ ಜನರಿಗೆ ತಿಳಿಸಿದರು.

ದತ್ತಣ್ಣ ಅವರು 45ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ ಮೂರು ರಾಷ್ಟ್ರ ಪ್ರಶಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಅಕ್ಷಯ್ ಕುಮಾರ್ ದತ್ತಣ್ಣ ಅವರನ್ನು ಹಾದಿ ಹೊಗಳುತ್ತಾರೆ.

ಆಗ ದತ್ತಣ್ಣ ಅವರು ನಾನು ಸಣ್ಣ ವಯಸ್ಸಿನಿಂದಲೂ ರಂಗ ಭೂಮಿ ಕಲಾವಿದನಾಗಿದ್ದೆ. ಆದರೆ ಸಿನಿಮಾ ದಲ್ಲಿ ನಟಿಸಲು ಆರಂಭಿಸಿದ್ದು ಮಾತ್ರ ನನ್ನ 45ನೇ ವಯಸ್ಸಿನಲ್ಲಿ. ನನಗೆ ಮೂರು ರಾಷ್ಟ್ರ ಪ್ರಶಸ್ತಿ ಬಂದಿರುವುದು ನನ್ನ ಕನ್ನಡ ಸಿನಿಮಾಗಳಿಗೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ದತ್ತಣ್ಣ ಮಾತನ್ನು ಕೇಳಿ ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ, ತ್ಯಾಪ್ಸಿ ಪನ್ನು ಸೇರಿದಂತೆ ಎಲ್ಲರು ಜೋರಾಗಿ ಚಪ್ಪಾಳೆ ತಟ್ಟುತ್ತಾರೆ.

ನಂತರ ನಾನು ನಟನಾಗುವುದ್ದಕ್ಕಿಂತ ಮೊದಲು ಏರ್ ಫೋರ್ಸ್ ನಲ್ಲಿ 23 ವರ್ಷ ಕೆಲಸ ಮಾಡಿದ್ದೆ. ಹಾಗು 9 ವರ್ಷಗಳ ಕಾಲ ಹೆಚ್ ಎ ನಲ್ಲಿ ಕೆಲಸ ಮಾಡಿದ್ದೆ. ಪಿ ಎಸ್ ಎಲ್ ವಿಯನ್ನು ಸ್ಪರ್ಶಿಸಿದ್ದೇನೆ ಕೂಡ. ಈ ಎಲ್ಲಾ ಸಾಧನೆಗಳನ್ನು ಹೇಳುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸೋನಾಕ್ಷಿ “ಇದನ್ನೆಲ್ಲ ನಮಗೆ ಹೇಳೆ ಇಲ್ಲವಲ್ಲಾ ದತ್ತಣ್ಣ” ಎಂದುಕೇಳುತ್ತಾರೆ. ದತ್ತಣ್ಣ ಅವರು ಹಲವಾರು ಸ್ನೇಹಿತರು ಇಸ್ರೋದಲ್ಲಿ ಕೆಲಸ ಮಡುತ್ತಿರುವುದಾಗಿಯೂ ಹೇಳಿ ಅವರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ತಿಳಿಸಿದರು.

“ದೂರದಿಂದ ಈ ಎಲ್ಲಾ ಸ್ಟಾರ್ ಗಳನ್ನು ನೋಡುತ್ತಿದ್ದೆ. ಆದ್ರೆ ಇಲ್ಲಿಗೆ ಎಂಟ್ರಿ ಕೊಟ್ಟಮೇಲೆ ಇವರೆಲ್ಲ ನನ್ನ ಸ್ನೇಹಿತರಾಗಿದ್ದಾರೆ. ಚಿತ್ರೀಕರಣ ವೇಳೆ ನನಗೆ ಆತ್ಮ ವಿಶ್ವಾಸ ತುಂಬಿದ್ದಾರೆ. ಚೆನ್ನಾಗಿ ನೋಡಿಕೊಂಡಿದ್ದಾರೆ” ಎಂದು ಚಿತ್ರತಂಡವನ್ನು ಹಾಡಿಹೊಗಳಿದ್ದರು.

‘ಮಿಷನ್ ಮಂಗಲ್’ ಭಾರತದ ಹೆಮ್ಮೆಯ MOM(ಮಾರ್ಸ್ ಆರ್ಬಿಟ್ ಮಿಷನ್) ಉಡಾವಣೆಯ ಕತೆಯನ್ನು ಆಧಾರಿತ ಚಿತ್ರ ಇದಾಗಿದೆ. ಈ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಸೇರಿದಂತೆ ನಟಿಯರಾದ ತ್ಯಾಪ್ಸಿ ಪನ್ನು, ನಿತ್ಯಾ ಮೆನನ್, ವಿದ್ಯಾ ಬಾಲನ್ ಮತ್ತು ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿದ್ದಾರೆ. ದೊಡ್ಡ ತಾರಾಬಳಗವಿರುವ ಈ ಚಿತ್ರದಲ್ಲಿ ಕನ್ನಡಿಗ ದತ್ತಣ್ಣ ಅವರ ಪಾತ್ರ ಅಭಿಮಾನಿಗಳ ಗಮನ ಸಳೆಯುತ್ತಿದೆ.

Related posts

ದರ್ಶನ್ ಬಗ್ಗೆ ಕಿಚ್ಚ ಶಾಕಿಂಗ್ ಹೇಳಿಕೆ…!

Deepak Chaubah

ನ್ಯೂಸ್ ಪೇಪರ್ ಪ್ರಿಂಟ್ ಇರುವ ಫ್ಯಾಬ್ರಿಕ್ ಡ್ರೆಸ್ ಲ್ಲಿ ಕಿಟ್ಟಿ ಪಾರ್ಟಿಯರ ಫ್ಯಾಷನ್..!

surjith

ಎಲ್ಲಿರುವೆ ಹರಿಯೇ’ ಕುರುಕ್ಷೇತ್ರದ 3ನೇ ಹಾಡು ರಿಲೀಸ್ !!

Kannada News