SportzGazette

ಥ್ರೋಬಾಲ್ ನಲ್ಲಿ ಅದ್ವಿತೀಯ ಸಾಧನೆ ಮೆರೆದ ಕೃಪಾ ಜಿ.ಪಿ.ರವರು ತಮಗೆ ಬೆನ್ನೆಲುಬಾಗಿ ನಿಂತಿದ್ದ IBEX Engineering P Ltd ಸಂಸ್ಥೆಗೆ ಕೃತಜ್ಞತೆ ತಿಳಿಸಿದ್ದಾರೆ .

ಕ್ರೀಡಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಸಾಧನೆ ನಗಣ್ಯ ಎನ್ನುವ ಈ ಕಾಲದಲ್ಲಿ ಕರ್ನಾಟಕದ ಕೃಪಾ ಜಿ.ಪಿ. ಯವರ ಸಾಧನೆ ಎಲ್ಲರ ಹುಬ್ಬೇರುವಂತೆ ಮಾಡಿದೆ.ಕೃಪಾ ಜಿ.ಪಿ. ಭಾರತೀಯ ರಾಷ್ಟ್ರೀಯ ತಂಡದ ಕಪ್ತಾನೆಯಾಗಿ ಸಾಧಿಸಿದಂತಹ ಸಾಧನೆ ಎಲ್ಲರಿಗೂ ಮಾದರಿ.ಮೂಲತಃ ಕೃಷಿ ಕುಟುಂಬದಿಂದ ಬಂದಂತಹ ಕೃಪಾ ಜಿ.ಪಿ. ಮೊದಲು ಆಟಗಾರ್ತಿಯಾಗಿ , ನಂತರ ತಂಡದ ಕಪ್ತಾನೆಯಾಗಿ ದೇಶ ಹೆಮ್ಮೆ ಪಡುವಂತಹ ಕಾರ್ಯ ಸಾಧಿಸಿದ್ದಾರೆ.

10 ಚಿನ್ನದ ಪದಕಗಳು ಅವರ ಸಾಧನೆಗೆ ಕನ್ನಡಿ ಹಿಡಿದಂತಿದೆ. ಹಳ್ಳಿಯಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿದ ಕೃಪಾ ಜಿ.ಪಿ.ರವರ ಸಾಹಸಗಾಥೆ ಸದಾ ಸ್ಮರಣೀಯ.ತಾಯಿ ಆದ ಮೇಲು ತನ್ನ ಕ್ರೀಡಾ ಪ್ರೇಮವನ್ನು ಬಿಟ್ಟು ಕೊಟ್ಟಿರಲಿಲ್ಲ ಕೃಪಾ ಜಿ.ಪಿ. ಇಂತಹ ಪ್ರತಿಭೆಗೆ ಬೆನ್ನೆಲುಬಾಗಿ ನಿಂತಂತಹ ಸಂಸ್ಥೆ ಎಂದರೆ,  IBEX Engineering P Ltd.

IBEX Engineering P Ltd ಸಂಸ್ಥೆ ಹಾಗೂ ಅಲ್ಲಿನ ಉದ್ಯೋಗಿಗಳು ಕೃಪಾ ಜಿ.ಪಿ ರವರ ಸಾಧನೆಯ ಪಯಣಕ್ಕೆ ಉತ್ಸಾಹ ತುಂಬಿದವರು. ಈ ಸಂಸ್ಥೆ ಹಲವಾರು ಪ್ರತಿಭೆಗಳ ಮಹದಾಸೆಗೆ ರೆಕ್ಕೆಯಾಗಿದ್ದಾರೆ ಪ್ರತಿಭೆಗಳನ್ನು ಗುರುತಿಸಿ ಅವರ ಕನಸಿಗೆ ಜೀವವನ್ನು ನೀಡುವ ಬೆಂಬಲಕರಿದ್ದರೆ ಕೃಪಾ ಜಿ.ಪಿ. ರವರಂತಹ ಅತ್ಯುತ್ತಮ ಕ್ರೀಡಾಪಟುವನ್ನು ಜಗತ್ತಿಗೆ ಪರಿಚಯಿಸಬಹುದೆಂಬುದನ್ನು IBEX Engineering P Ltd ತೋರಿಸಿಕೊಟ್ಟಿದೆ.ಅಲ್ಲದೇ ಕೃಪಾ ಜಿ.ಪಿ. ಯವರೇ ಸ್ವತಃ ಸಂಸ್ಥೆಯ ಕುರಿತು ಧನ್ಯತಾ ಭಾವವನ್ನು ವ್ಯಕ್ತಪಡಿಸಿದ್ದಾರೆ.

ಕೃಪಾ ಜಿ.ಪಿ ಮಹತ್ತರವಾದ ಆಸೆಯೇನೆಂದರೆ, ಕ್ರಿಕೆಟ್, ಕಬಡ್ಡಿಯಂತೆಯೇ ಥ್ರೋಬಾಲ್ ಗೂ ಜಾಗತಿಕ ಸ್ಥಾನಮಾನ ಹಾಗೂ ಒಲಿಂಪಿಕ್ ನಲ್ಲಿ ಆದ್ಯತೆ ದೊರೆಯಬೇಕೆನ್ನುವುದು. ಥ್ರೋಬಾಲ್ ಆಟಗಾರರಿಗೂ ಸಹ ಉತ್ತಮ ಬೆಂಬಲ ಹಾಗೂ ಅವಕಾಶ ದೊರಕಲಿ ಎನ್ನುವುದು ಅವರ ಮಹದಾಸೆ.ಇವರ ಈ ನಿಸ್ವಾರ್ಥ ಆಸೆ ಅತೀ ಬೇಗನೆ ಈಡೇರಲಿ ಎಂಬುದು ಪ್ರತಿಯೊಬ್ಬ ಕ್ರೀಡಾಪ್ರೇಮಿಯ ಆಶಯ.