SportzGazette

ಓಂ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ನಿಜವಾದ ರೌಡಿಗಳ ಹಾವಳಿ…!

ಕನ್ನಡ ಚಿತ್ರರಂಗದಲ್ಲಿ ನೂರಾರು ರೌಡಿಸಂ ಆಧಾರಿತ ಚಿತ್ರಗಳು ಬಂದು ಹೋಗಿವೆ. ಆದರೆ ಆ ಒಂದು ಭೂಗತ ಲೋಕ ಕಥೆ ಆಧಾರಿತ ಚಿತ್ರ ಮಾತ್ರ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ. ಹೌದು ನಿಮ್ಮ ಊಹೆ ಸರಿ ಇದೆ. ನಾವು ಇಲ್ಲಿ ಮಾತನಾಡುತ್ತಿರುವುದು ‘ಓಂ’ ಚಿತ್ರದ ಬಗ್ಗೆ. ಸುಮಾರು ಎರಡೂವರೆ ದಶಕಗಳ ಹಿಂದೆ ಬಿಡುಗಡೆಯಾದ ಶಿವ ರಾಜಕುಮಾರ್ ಅಭಿನಯದ ‘ಓಂ’ ಸಿನಿಮಾ ಕನ್ನಡ ಚಿತ್ರದ ಒಂದು ಮೈಲಿಗಲ್ಲು. ಉಪೇಂದ್ರ ನಿರ್ದೇಶನದ ಈ ಚಿತ್ರ 662 ಬಾರಿ ಬಿಡುಗಡೆಯಾಗಿರುವ ಹಿರಿಮೆ ಹೊಂದಿದೆ. ಈ ಚಿತ್ರದ ಅಭೂತಪೂರ ಯಶಸ್ಸಿಗೆ ಹಲವಾರು ಕಾರಣಗಳಿವೆ. ಅದರಲ್ಲಿ ಈ ಚಿತ್ರದಲ್ಲಿ ನಿಜವಾದ ರೌಡಿಗಳು ನಟಿಸಿರುವುದು ಒಂದು. ಅಂದಿನ ಬೆಂಗಳೂರಿನ ಎಲ್ಲ ಅಕ್ರಮ ದಂಧೆಗಳನ್ನು ಆಳುತ್ತಿದ್ದ ದೊರೆಗಳನ್ನು ಬೆಳ್ಳಿ ತೆರೆಮೇಲೆ ನೋಡಲು ಜನ ಮುಗುಬಿದ್ದದ್ದು ನಿಜ.

ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ತನ್ವಿರ್ ಅಹಮದ್ ಹಾಗು ಜೇಡರಹಳ್ಳಿ ಕೃಷ್ಣರಂತಹ ನಿಜವಾದ ಭೂಗತಲೋಕದ ದೊರೆಗಳು ಅಂದರೆ ಸಮಾಜ ಕಂಟಕರು, ಓಂ ಚಿತ್ರದಲ್ಲಿ ಪ್ರಮುಖ ಪತ್ರಗಳನ್ನು ವಹಿಸಿದ್ದರು. ಬಹುಷಃ ಉಪೇಂದ್ರರವರು ಶಿವ ರಾಜಕುಮಾರ್ ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿದ್ದು ಅವರ ಹೆಸರ ಮುಂದೆ ಇರುವ ಆ ಅತ್ಯಂತ ಪ್ರಬಲ ‘ ರಾಜಕುಮಾರ್’ ಎಂಬ ಹೆಸರೇ ಕರಣ ಅನಿಸುತ್ತದೆ. ಏಕೆಂದರೆ ನಿಜವಾದ ರೌಡಿಗಳನ್ನು ಸಂಪರ್ಕಿಸಿ ಅವರ ಬಳಿ ನಟನೆ ಮಾಡಿಸುವುದು ತಮಾಷೆಯ ಮಾತು ಆಗಿರಲೇ ಇಲ್ಲ.

ಈಗ ಕನ್ನಡ ಚಿತ್ರದಲ್ಲಿ ಮತ್ತೆ ಈ ಸನ್ನಿವೇಶ ಮರುಕಳಿಸುತ್ತಿದೆ. ಹೌದು, ಮತ್ತೆ ಕನ್ನಡ ಸಿನಿಮಾವೊಂದರಲ್ಲಿ ನಿಜವಾದ ರೌಡಿಗಳು ಅಭಿನಯಿಸುತ್ತಿದ್ದಾರೆ! ಅದು ಯಾವ ಸಿನಿಮಾ ಗೊತ್ತಾ? ಮುಂದೆ ಓದಿ…

ಪಡುಕೋಟೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಯಾರ್ ಮಗ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ ನಿರ್ಮಾಪಕ ಬಸವರಾಜ್ ಪಡುಕೋಟೆ ಪುತ್ರ ರಘು ಪಡುಕೋಟೆ ಸ್ವತಃ ಕಥೆ ಬರೆದು, ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಸುರೇಶ್ ರಾಜ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ತಾಯಿ ಮಗನ ಬಾಂಧವ್ಯ ಹಾಗೂ ಭೂಗತ ಜಗತ್ತಿನ ಕಥಾಹಂದರವಿರುವ ಚಿತ್ರದಲ್ಲಿ ಶಿವಾಜಿನಗರದ ನಿಜವಾದ ರೌಡಿಗಳೇ ನಟಿಸಲಿದ್ದಾರಂತೆ.

ನಾಯಕಿಯಾಗಿ ವಿದ್ಯಾ ಪ್ರಭು, ತಾಯಿಯ ಪಾತ್ರದಲ್ಲಿ ಅಶ್ವಿನಿ ಗೌಡ, ಖಳನಟರಾಗಿ ಗಣೇಶ್ ರಾವ್, ಹರೀಶ್ ಗೌಡ, ಮೈಕೆಲ್ ಮಧು, ಗುರುರಾಜ್ ಹೊಸಕೋಟೆ, ಸುನಿಲ್, ಶಾಲಿನಿ ಗೌಡ ಮೊದಲಾದವರಿದ್ದಾರೆ ಇನ್ನುಳಿದ ಪಾತ್ರಧಾರಿಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡುವುದಾಗಿ ನಿರ್ದೇಶಕ ಸುರೇಶ್ ರಾಜ್ ಹೇಳಿದರು.

Related posts

ದರ್ಶನ್ ಬಗ್ಗೆ ಕಿಚ್ಚ ಶಾಕಿಂಗ್ ಹೇಳಿಕೆ…!

Deepak Chaubah

ನಾವೇನು ಲೇಕಕ್ಕೆ ಇಲ್ಲ ಅವರ ಮುಂದೆ ಅನ್ನೋ ತರ ನೋಡುತ್ತಾರೆ…! : ಕಿಚ್ಚ ಸುದೀಪ್

surjith

ಕನ್ನಡದ ಈ ನಟನ ಸಾಧನೆಗಳನ್ನು ಕೇಳಿ ದಂಗಾದ ಬಾಲಿವುಡ್ ತಾರೆಯರು…!

Editor