SportzGazette

‘ಮುನಿರತ್ನ ಕುರುಕ್ಷೇತ್ರ’ದ ಪಂಚ ಪಾಂಡವರು ಯಾರು ಗೊತ್ತಾ…?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ವನ್ನು ಕೊನೆಗೂ ಅಭಿಮಾನಿಗಳು ಕಣ್ತುಂಬಿಕೊಳ್ಳುವ ದಿನ ಸಮೀಪಿಸುತ್ತಿದ್ದು, ಅಭಿಮಾನಿಗಳು ಅತ್ಯುತ್ಸಾಹದಿಂದ ಕಾಯುತ್ತಿದ್ದಾರೆ. ಸುಮಾರು 3 ವರುಷಗಳಿಂದ ದರ್ಶನ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಮುಗಿಲು ಮುಟ್ಟಿದೆ. ಅಲ್ಲದೆ ಕನ್ನಡಿಗರ ಪ್ರೀತಿಯ ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕೊನೆಯ ಬಾರಿಗೆ ಬೆಳ್ಳಿ ತೆರೆಯ ಮೇಲೆ ನೋಡುವ ಅವಕಾಶ ಈ ಚಿತ್ರ ಕನ್ನಡಿಗರಿಗೆ ನೀಡುತ್ತಿರುವ ಕಾರಣ, ಚಿತ್ರದ ಸೊಗಡನ್ನು ಹೆಚ್ಚಿಸಿದೆ.

ಕುರುಕ್ಷೇತ್ರ, ಮಹಾಭಾರತ ಆಧಾರಿತ ಸಿನಿಮಾವಾದ್ದರಿಂದ, ಯಾವ ಪಾತ್ರಗಳಿಗೆ ಯಾರು ಜೀವ ತುಂಬಿರುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತದೆ. ದರ್ಶನ್ ಅವರು ದುರ್ಯೋಧನ ಪಾತ್ರ ವಹಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಇನ್ನು ರವಿಚಂದ್ರನ್ ಅವರು ಕೃಷ್ಣನ ಪಾತ್ರ, ಅಂಬಿ ಭೀಷ್ಮನ ಪಾತ್ರ, ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಪಾತ್ರ, ಅರ್ಜುನ್ ಸರ್ಜಾ ಕರ್ಣನ ಪಾತ್ರ ವಹಿಸುತ್ತಿರುವುದಾಗಿ ಚಿತ್ರತಂಡ ಮಾಹಿತಿ ನೀಡಿತ್ತು. ಹಾಗು ಇತ್ತೀಚೆಗೆ ಚಿತ್ರತಂಡ ಯೌಟ್ಯೂಬ್ ನಲ್ಲಿ ಬಿಡುಗಡೆಯಾದ ಟ್ರೇಲರ್ ನಲ್ಲಿ ಭಾರತಿ ವಿಷ್ಣುವರ್ಧನ್ ಅವರು ಕುಂತಿಯ ಪಾತ್ರ, ರವಿಶಂಕರ್ ಅವರು ಶಕುನಿಯ ಪಾತ್ರಗಳಲ್ಲಿ ಅಭಿನಯಿಸುತ್ತಿರುವುದು ಕಂಡುಬಂತು. ಈಗ ಚಿತ್ರ ಬಿಡುಗಡೆ ಹಂತದಲ್ಲಿ ಇರುವುದರಿಂದ ಮಿಕ್ಕ ಮುಖ್ಯ ಪಾತ್ರಗಳಾದ ಪಂಚ ಪಾಂಡವರು, ದ್ರೌಪದಿ, ಭಾನುಮತಿ, ಉತ್ತಾರ, ದೃತರಾಷ್ಟ್ರ ಹಾಗು ದ್ರೋಣಾಚಾರ್ಯ ಪತ್ರಗಳನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂದು ಈಗ ತಿಳಿದುಕೊಳ್ಲಲು ಮುಂದೆ ಓದಿ….

ಈ ಸಿನಿಮಾ ಕೌರವ ದುರ್ಯೋಧನನ ದೃಷ್ಟಿಕೋನದಿಂದ ಮಹಾಭಾರತ ಕತೆ ಹೇಳಿದರು, ಪಾಂಡವರು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಆದ್ದರಿಂದ ಚಿತ್ರದಲ್ಲಿ ಪಾಂಡವರ ಪಾತ್ರಕ್ಕೂ ಪ್ರಾಮುಖ್ಯತೆ ಕೊಡಲಾಗಿದೆ. ಶಶಿಕುಮಾರ್ ಯುಧಿಷ್ಠಿರನಾಗಿ, ದಾನಿಶ್ ಅಫ್ತಾರ ಭೀಮನಾಗಿ, ಸೋನು ಸೂದ್ ಅರ್ಜುನನಾಗಿ, ಯಶಸ್ ಹಾಗು ಚಂದನ್ ಅವರು ನಕುಲ – ಸಹದೇವರಾಗಿ ಅಭಿನಯಿಸಿದ್ದಾರೆ. ಇವರ ಮಾಡಿದಿ ಡ್ರಾಉಪದಿ ಪಾತ್ರವನ್ನು ಸ್ನೇಹ ಪ್ರಸನ್ನ ಅವರು ವಹಿಸಿದ್ದಾರೆ.

ಇನ್ನು ಭಾನುಮತಿ ಹಾಗು ಉತ್ತಾರ ಪಾತ್ರವನ್ನು ಮೇಘನಾ ರಾಜ್ ಹಾಗು ಅದಿತಿ ಆರ್ಯ ಅವರು ನಿಭಾಯಿಸಿದರೆ, ಶ್ರೀನಾಥ್ ಹಾಗು ಶ್ರೀನಿವಾಸ್ ಮೂರ್ತಿ ಅವರು ದೃತರಾಷ್ಟ್ರ ಹಾಗು ದ್ರೋಣಾಚಾರ್ಯರ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ನಾಗಣ್ಣ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದ್ದಾರೆ. ಚಿತ್ರವು ಆಗಸ್ಟ್ 12 ರಂದು ದೇಶಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Related posts

ಕನ್ನಡದ ಈ ನಟನ ಸಾಧನೆಗಳನ್ನು ಕೇಳಿ ದಂಗಾದ ಬಾಲಿವುಡ್ ತಾರೆಯರು…!

Editor

ಶ್ರುತಿ ಹರಿಹರನ್ ಗರ್ಭಿಣಿ! ಇನ್ಸ್ಟಾಗ್ರಾಮ್ ನಲ್ಲಿ ಸಂತಸ ಹಂಚಿಕೊಂಡ ನಟಿ !

surjith

ದರ್ಶನ್ ಬಗ್ಗೆ ಕಿಚ್ಚ ಶಾಕಿಂಗ್ ಹೇಳಿಕೆ…!

Deepak Chaubah