SportzGazette

ಮೂರು ಪಕ್ಷಗಳು ಸೇರಿ ಸರಕಾರ ರಚಿಸಿ: ಪೇಜಾವರ ಶ್ರೀ

ಮೂರು ಪಕ್ಷಗಳು ಸೇರಿ ರಚಿಸಿಬಿಡಲಿ. ಆಗಲಾದರೂ ರಾಜ್ಯ ಅಭಿವೃದ್ಧಿಯಾಗುವ ವಿಶ್ವಾಸ ಇದೆ ಎಂದು ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶ್ವ ತೀರ್ಥ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.

ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಪೇಜಾವರ ಶ್ರೀಗಳು ಮಾತನಾಡಿದರು.

 

View this post on Instagram

 

Udupi: Slanderous remarks about #PejawarSwamiji – complaint filed – https://goo.gl/Dkedm4

A post shared by Daijiworld News (@daijiworldnews) on

ಎಲ್ಲರೂ ಅಧಿಕಾರ ಗದ್ದುಗೆ ಏರಲು ಹಾತೊರೆಯುತ್ತಿದ್ದಾರೆ.ಚುನಾವಣೆಗೆ ಮುನ್ನ ಎಲ್ಲ ಪಕ್ಷಗಳು ಬೈದಾಡಿಕೊಂಡಿದೆ. ವಾಕ್ಸಮರ ನಡೆಸಿದೆ. ನಂತರ ಒಂದಾಗಿ ಸರಕಾರ ರಚಿಸಿದೆ. ಈಗಲೂ ಜಗಳ ಮುಂದುವರಿದಿದೆ. ಹೀಗಾಗಿ ಎಲ್ಲ ಪಕ್ಷಗಳು ಒಂದಾಗಿ ಸರಕಾರ ರಚಿಸಲಿ ಎಂದು ಶ್ರೀಗಳು ಆಗ್ರಹಿಸಿದರು.

ಬಿಜೆಪಿ ಹಿಂದೂ ಪರ ಎಂದು ಮೈತ್ರಿ ಸರಕಾರ ರಚನೆ ಮಾಡಲಾಗಿದೆ. ಆದರೆ ಬಿಜೆಪಿ ಜಾತ್ಯತೀತ ಪಕ್ಷವೂ ಹೌದು. ಇದಕ್ಕಾಗಿ ಮೂರು ಪಕ್ಷ ಜತೆಯಾಗಿ ಸರಕಾರ ರಚಿಸಲಿ. ಆಗ ರೆಸಾರ್ಟ್‌ ರಾಜಕೀಯ, ಪಕ್ಷಾಂತರ ಬಂದ್‌ ಆಗುತ್ತವೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

Related posts

ರಾಜ್ಯ ಸರ್ಕಾರವನ್ನು ನಡುಗಿಸಿದ ಆಪರೇಷನ್‍ ಕಮಲದ ಹಿಂದಿನ ಅಸಲಿಶಕ್ತಿ ಯಾರು ಗೊತ್ತಾ?

Editor