SportzGazette

ಟ್ವಿಟರ್ ನಲ್ಲಿ ಬೆತ್ತಲೆ ವಿಡಿಯೋ ಹಂಚಿಕೊಂಡ ಹೆಬ್ಬುಲಿ ಸಿನಿಮಾ ನಟಿ…!

ಕಿಚ್ಚ ಸುದೀಪ್ ನಟನೆಯ ಕನ್ನಡದ ಕಮರ್ಷಿಯಲ್ ಹಿಟ್ ಸಿನಿಮಾ ‘ಹೆಬ್ಬುಲಿ’ ಯಲ್ಲಿ ನಾಯಕಿ ಪಾತ್ರ ವಹಿಸಿದ್ದ ಕೇರಳ ಮೂಲದ ತಾರೆ ಅಮಲಾ ಪೌಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬೆತ್ತಲೆ ದೃಶ್ಯದ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಇದೇನಪ್ಪ ಇವರು ದಿಢೀರನೆ ಇಂತ ಕೆಲಸ ಮಾಡಿದ್ದಾರೆ ಎಂದು, ಅವರನ್ನು ಮನಸಿನಲ್ಲೇ ನಿಂದಿಸುವ ಮೊದಲು, ಅವರು ನಗ್ನ ದೃಶ್ಯವನ್ನು ಹಂಚಿಕೊಂಡಿರುವ ಕಾರಣವನ್ನು ಮುಂದೆ ಓದಿ.

ಅಮಲಾ ಪೌಲ್ ದಕ್ಷಿಣ ಭಾರತದ ಖ್ಯಾತ ನಟಿ. ವಿವಾದಾತ್ಮಕ ಹಾಗು ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಿರುವ ಕೀರ್ತಿ ಹೊಂದಿರುವವರು. ವಿವಾದ್ಮಾತ್ಮಕ ಚಿತ್ರದಿಂದಲೇ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು ಈಗ ಮತ್ತೊಂದು ಪ್ರಯೋಗಾತ್ಮಕ ಸಿನಿಮಾದಲ್ಲಿ ನಟಿಸಿದ್ದು, ಅದು ಬಿಡುಗಡೆ ಹಂತದಲ್ಲಿದೆ. ಅಮಲಾ ಪೌಲ್ ಅವರು ಹಂಚಿಕೊಂಡಿರುವ ದೃಶ್ಯಕ್ವು ಇದೆ ಚಿತ್ರದದ್ದು. ಆ ಚಿತ್ರದ ಕತೆಗೆ ಅಮಲಾ ಪೌಲ್ ಅವರು ನಗ್ನವಾಗಿ ನಟಿಸಿರುವ ದೃಶ್ಯ ಬಹಳ ಪ್ರಮುಖವಾದದ್ದು ಎಂದು ತಿಳಿದುಬಂದಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ವಿಭಿನ್ನ ಪಾತ್ರದಲ್ಲಿ ನಟಿಸಿದ್ದೇನೆ. ನಶೆಯಲ್ಲಿ ನಾಪತ್ತೆಯಾಗುವ ಮಗಳ ಪಾತ್ರದಲ್ಲಿ ನಟಿಸಿದ್ದೇನೆ. ಈ ರೀತಿಯ ಪಾತ್ರ ಮಾಡುವುದಕ್ಕೂ ಒಂದು ಕಾರಣ ಇದೆ. ಈ ಚಿತ್ರದ ಮೊದಲು ನಾನು ಅತ್ಯಾಚಾರ ಸಂತ್ರಸ್ತೆ, ಹೋರಾಟ ಮಾಡುವ ಮಹಿಳೆ, ತಂಗಿ ಹಾಗೂ ತಾಯಿಯ ಪಾತ್ರದಲ್ಲಿ ನಟಿಸಿ ಬೋರ್ ಆಗಿತ್ತು. ಇದರಿಂದಾಗಿ ನನಗೆ ಬೋರ್ ಆಗಿ ಸಿನಿಮಾ ರಂಗವನ್ನು ಬಿಡಲು ಮುಂದಾಗಿದ್ದೆ. ಚಿತ್ರದಲ್ಲಿ ಇದು ವಿಶೇಷ ಪಾತ್ರ ಅನಿಸಿದ್ದಕ್ಕೆ ಅಭಿನಯಿಸಲು ಒಪ್ಪಿಕೊಂಡೆ ಎಂದು ಹೇಳಿದರು.

ಅಂದಹಾಗೆ ಇದು ತಮಿಳು, ತೆಲುಗು ಹಾಗು ಮಲಯಾಳಂನಲ್ಲಿ ತಯಾರಾಗಿರುವ ತ್ರಿ- ಭಾಷಾ ಸಿನಿಮಾ ‘ಅಡೈ’. ವಿಡಿಯೋದಲ್ಲಿ ಅಮಲಾ ನಗ್ನವಾಗಿದ್ದು, ಅದನ್ನು ಕನ್ನಡಿಯಲ್ಲಿ ನೋಡಿಕೊಂಡಿದ್ದಾರೆ. ಬಳಿಕ ಮೈ ಮೇಲೆ ಬಟ್ಟೆ ಇಲ್ಲದೆ ಕನ್ನಡಿಯನ್ನು ಹಿಡಿದುಕೊಂಡು ಬಂದಿರುವ ದೃಶ್ಯ ಇದಾಗಿದೆ. ಈ ವಿಡಿಯೋ ಸುಮಾರು 2 ನಿಮಿಷ 31 ಸೆಕೆಂಡ್ ಇದ್ದು, ಈಗಾಗಲೇ ಬಿಡುಗಡೆಯಾದ ಒಂದೇ ದಿನದಲ್ಲಿ ಯೂಟ್ಯೂಬ್‍ನಲ್ಲಿ 24 ಲಕ್ಷಕ್ಕಿಂದ ಅಧಿಕ ಮಂದಿ ವೀಕ್ಷಿಸಿದ್ದಾರೆ.

Related posts

ಓಂ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ನಿಜವಾದ ರೌಡಿಗಳ ಹಾವಳಿ…!

Deepak Chaubah

ನಾವೇನು ಲೇಕಕ್ಕೆ ಇಲ್ಲ ಅವರ ಮುಂದೆ ಅನ್ನೋ ತರ ನೋಡುತ್ತಾರೆ…! : ಕಿಚ್ಚ ಸುದೀಪ್

surjith

‘ಮುನಿರತ್ನ ಕುರುಕ್ಷೇತ್ರ’ದ ಪಂಚ ಪಾಂಡವರು ಯಾರು ಗೊತ್ತಾ…?

Kannada News