SportzGazette

ರಾಜ್ಯ ಸರ್ಕಾರವನ್ನು ನಡುಗಿಸಿದ ಆಪರೇಷನ್‍ ಕಮಲದ ಹಿಂದಿನ ಅಸಲಿಶಕ್ತಿ ಯಾರು ಗೊತ್ತಾ?

ರಾಜ್ಯ ರಾಜಕೀಯದಲ್ಲಿ ಹೊಸ ಹೊಸ ಬಾಂಬ್‍ಗಳೇ ಬೀಳುತ್ತಿದೆ. ಯಾವ ಕ್ಷಣದಲ್ಲಿ ಏನಾಗುತ್ತಿದೆ ಎಂಬುದು ಮಾತ್ರ ತಿಳಿಯದಂತಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಅಯೋಮಯವಾಗಿದ್ದು, ಸರ್ಕಾರ ಪತನಗೊಳ್ಳಲು ಸೂಚನೆ ಹೆಚ್ಚಾಗಿ ಕಾಣುತ್ತಿದೆ. ಪ್ರಸ್ತುತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅತೃಪ್ತ ಶಾಸಕರು ಮುಂಬೈನ ತಾಜ್‍ ಹೋಟೆಲ್ ನಿಂದ ಗೋವಾ ಕಡೆಗೆ ತೆರಳುತ್ತಿದ್ದಾರೆ. ಈ ಎಲ್ಲಾ ಹೈಡ್ರಾಮಾ ಹಿಂದೆ ಬಿಜೆಪಿ ಕೈವಾಡ ಇದೆ ಎಂಬ ಮಾತು ಮತ್ತು ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ಇದೇ ಹೊತ್ತಿನಲ್ಲಿ ಕೆಲ ಮೂಲಗಳು ಕೂಡ ಈ ಮಾತನ್ನು ಬೆಂಬಲಿಸುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಆದರೆ ವಾಸ್ತವವಾಗಿ ಆಪರೇಷನ್​​​​​​ ಕಮಲದ ಉಸ್ತುವಾರಿಯನ್ನು ಯಾರು ವಹಿಸಿದ್ದಾರೆ? ಇದರ ಹಿಂದಿನ ಸೂತ್ರದಾರಿ ಯಾರು ಎಂಬುದು ಮಾತ್ರ ಇಂದಿಗೂ ನಿಗೂಢವಾಗಿದೆ. ಆದರೆ ದೊಡ್ಡ ಕೈ ಮಾತ್ರ ಕೆಲಸ ಮಾಡಿರುವುದನ್ನು ಯಾರೂ ತೆಗೆದು ಹಾಕುವಂತಿಲ್ಲ. ಹಾಗಾದರೆ ಆ ದೊಡ್ಡ ಕೈ ಯಾರದ್ದು? ಇಲ್ಲಿದೆ ನೋಡಿ ಫುಲ್‍ ಡೀಟೇಲ್ಸ್‍.

ಬಿಜೆಪಿ ಪಕ್ಷದ ಮಹಾರಾಷ್ಟ್ರ ಮೂಲದ ಪಿಯೂಷ್​ ಗೋಯಲ್​ಗೆ ಅಮಿತ್ ಶಾ ಆಪರೇಷನ್ ಕಮಲದ ಹೊಣೆಗಾರಿಕೆ ನೀಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲೇ ಉಳಿದುಕೊಂಡು ಎಲ್ಲಾ ರೀತಿಯ ದಾಳ ಉರುಳಿಸಿ, ಆಪರೇಷನ್ ಕಮಲ ನಡೆಸುತ್ತಿದ್ದಾರೆ. ಪಿಯೂಷ್​ ಗೋಯಲ್‍ ಮಾತಿನಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಮಲ್ಲೇಶ್ವರಂ ಬಿಜೆಪಿ ಶಾಸಕ ಸಿ.ಎನ್. ಅಶ್ವತ್ಥ ನಾರಾಯಣ್, ಬಿಎಸ್​ವೈ ಆಪ್ತ ಎನ್​​​. ಆರ್​​​. ಸಂತೋಷ್​, ಮಾಜಿ ಸಚಿವ ಸಿಪಿ ಯೋಗೇಶ್ವರ್​​​ ಯೋಜನೆಯನ್ನು ಚಾಚೂ ತಪ್ಪದೇ ಕಾರ್ಯರೂಪಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಜೆಡಿಎಸ್‍ ನ ಮಾಜಿ ಅಧ್ಯಕ್ಷ ಹೆಚ್​. ವಿಶ್ವನಾಥ್​​​ ಅವರು ಸಾಥ್ ನೀಡುತ್ತಿರುವುದು ಇಂದಿಗೆ ರಹಸ್ಯವಾಗಿ ಉಳಿದಿಲ್ಲ. ರಾಜ್ಯದ ಶಾಸಕರು ಮಹಾರಾಷ್ಟ್ರಕ್ಕೆ ತೆರಳಿದ್ದರ ಹಿಂದೆಯೂ ಕೂಡ, ಗೋಯಲ್‍ ಅವರ ಕೈವಾಡವಿರುವುದು ಈಗ ಬಹಿರಂಗವಾಗಿದೆ. ಮಹಾರಾಷ್ಟ್ರ ಬಿಜೆಪಿ ನಾಯಕರು ಕೂಡ ಆಪರೇಷನ್‍ ಕಮಲಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವುದು ಕೂಡ ಕಂಡುಬಂದಿದೆ. ಈ ಎಲ್ಲಾ ಕಾರಣಗಳಿಗಾಗಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

Related posts

ಮೂರು ಪಕ್ಷಗಳು ಸೇರಿ ಸರಕಾರ ರಚಿಸಿ: ಪೇಜಾವರ ಶ್ರೀ

Kannada News