SportzGazette

ಎಲ್ಲಿರುವೆ ಹರಿಯೇ’ ಕುರುಕ್ಷೇತ್ರದ 3ನೇ ಹಾಡು ರಿಲೀಸ್ !!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಚಿತ್ರವು ಆಗಸ್ಟ್ 2 ರಂದು ಬಿಡುಗಡೆಯಾಗಲಿದೆ.. ಈಗ ಈ ಚಿತ್ರದ ಮೂರನೇ ಹಾಡು ‘ಎಲ್ಲಿರುವೆ ಹರಿಯೇ’ ಎಂಬ ಭಕ್ತಿಗಾನವನ್ನು ರಿಲೀಸ್ ಮಾಡಿದ್ದಾರೆ..

ಈ ಹಾಡಿನ ಸನ್ನಿವೇಶವು ದ್ರೌಪದಿಯ ವಸ್ತ್ರಾಪಹರಣವಾದಾಗ ದ್ರೌಪದಿಯು ಭಕ್ತಿಯಿಂದ ಕೃಷ್ಣ ನನ್ನು ಕೂಗಿ ಕರೆಯುತ್ತಾಳೆ.. “ಕುರುಕುಲದ ಹಿರಿಯರೇ ಇದೇ ನಿಮ್ಮ ಕುಲ ಚರಿತೆಯೇ ಮಹಾಮಹಿಮ ಗುರುಗಳೇ ಇದು ನಿಮ್ಮ ಸಂಸ್ಕಾರವೇ” ಎಂದು ಹಾಡು ಶುರುವಾಗುತ್ತದೆ.. ಈ ಹಾಡಿಗೆ ಅನುರಾಧಾ ಭಟ್ ಧ್ವನಿಯಗಿದ್ದಾರೆ.. ಇನ್ನು ದ್ರೌಪದಿ ಪಾತ್ರದಲ್ಲಿ ನಟಿ ಸ್ನೇಹಾ ಅಭಿನಯಿಸಿದ್ದಾರೆ..

 

View this post on Instagram

 

#sneha #kurukshetra movie

A post shared by punngai ilavarasi_fan page (@actres_sneha) on

ವಿ. ನಾಗೇಂದ್ರ ಪ್ರಸಾದ್ ಈ ಹಾಡನ್ನು ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.

100 ಕೋಟಿ ರೂ.ಬಜೆಟ್ ನಲ್ಲಿ ‘ಕುರುಕ್ಷೇತ್ರ’ ನಿರ್ಮಾಣವಾಗಿದ್ದು, ಕನ್ನಡದಲ್ಲಿ 2ಡಿ ಮತ್ತು 3ಡಿ ಯಲ್ಲಿ ಸಿದ್ಧವಾಗಿದೆ. ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಹಂಚಿಕೆಯಾಗಿದೆ. ತಮಿಳು ಮತ್ತು ತೆಲುಗು ಹಾಗೂ ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಡಬ್ ಅಗುತ್ತಿದ್ದು, ಜೆಕೆ ಭಾರವಿ ಬರೆದಿರುವ ಕುರುಕ್ಷೇತ್ರ ಸಿನಿಮಾವನ್ನು ಮುನಿರತ್ನ ನಿರ್ಮಾಣ ಮಾಡಿ,ನಾಗಣ್ಣ ನಿರ್ದೇಶನ ಮಾಡಿದ್ದಾರೆ.

Related posts

ಶ್ರುತಿ ಹರಿಹರನ್ ಗರ್ಭಿಣಿ! ಇನ್ಸ್ಟಾಗ್ರಾಮ್ ನಲ್ಲಿ ಸಂತಸ ಹಂಚಿಕೊಂಡ ನಟಿ !

surjith

ಓಂ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ನಿಜವಾದ ರೌಡಿಗಳ ಹಾವಳಿ…!

Deepak Chaubah

‘ಮುನಿರತ್ನ ಕುರುಕ್ಷೇತ್ರ’ದ ಪಂಚ ಪಾಂಡವರು ಯಾರು ಗೊತ್ತಾ…?

Kannada News