SportzGazette

ಶ್ರುತಿ ಹರಿಹರನ್ ಗರ್ಭಿಣಿ! ಇನ್ಸ್ಟಾಗ್ರಾಮ್ ನಲ್ಲಿ ಸಂತಸ ಹಂಚಿಕೊಂಡ ನಟಿ !

ಕೇರಳ ಮೂಲದ ಈ ಮೂಗೂತಿ ಸುಂದರಿ, ಕನ್ನಡ, ತಮಿಳು ಹಾಗು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಮೊನಚಾದ ನಟನೆಗೆ ಹೆಸರುವಾಸಿಯಾಗಿರುವ ಶ್ರುತಿ ಹರಿಹರನ್, ಕಳೆದ ಒಂದು ವರ್ಷದಿಂದ ತಮ್ಮ ಸಿನಿಮಾ ಸುದ್ದಿಯಿಂದ ಸದ್ದು ಮಾಡದಿದ್ದರೂ, ದಕ್ಷಿಣ ಭಾರತದ ಪ್ರಖ್ಯಾತ ನಟ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ಕಿರುಕುಳ ಪ್ರಕರಣವನ್ನು #metoo ಅಭಿಯಾನ ದೇಶದಲ್ಲಿ ಸಂಚಲನ ಮೂಡಿಸುತ್ತಿದ್ದ ವೇಳೆಯಲ್ಲಿ ಆರೋಪಿಸಿ ದಿನ ಬೆಳಗಾದರೆ ಪತ್ರಿಕೆಗಳ ಮೊದಲನೇ ಪುಟದಲ್ಲಿ ಬರುವಂತೆ ಆಗಿದ್ದರು. ಆ ಪ್ರಕರಣದಲ್ಲಿ ಶ್ರುತಿ ಅವರಿಗೆ ನಿಜವಾಗಲೂ ಅನ್ಯವಾಗಿದೆಯೋ ಅಥವಾ ಸುಳ್ಳು ಆರೋಪ ಮಾಡಿದ್ದರೋ ಎಂದು ಇಲ್ಲಿಯವರೆಗೂ ಜನ ಸಾಮಾನ್ಯರಿಗೆ ತಿಳಿದು ಬಂದಿಲ್ಲ. ಜನರು ಕೂಡ ಅದನ್ನು ಮರೆತಿದ್ದಾರೆ.

 

View this post on Instagram

 

#congratulations #shruthihariharan #NammaSuperstars

A post shared by Namma Superstars (@namma_superstars) on

ಶ್ರುತಿ ಹರಿಹರನ್ ಅವರಿಗೆ ಆ ಪ್ರಕರಣದಲ್ಲಿ ನ್ಯಾಯ ದೊರಕಿತೋ ಇಲ್ಲವೋ ಗೊತ್ತಿಲ್ಲ, ಆದರೆ ಸಾಕಷ್ಟು ತೊಂದರೆಯಂತೂ ಉಂಟಾಯಿತು. ಸರ್ಜಾ ಕುಟುಂಬದ ನಟರ ಅಭಿಮಾನಿಗಳಿಂದ ಸಾಕಷ್ಟು ಬೆದರಿಕೆ ಕರೆಗಳು, ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶಗಳು, ನಿಂದನೆಯ ಕಾಮೆಂಟ್ ಗಳನ್ನು ಎದುರಿಸಬೇಕಾಯಿತು. ಇದು ಮಾನಸಿಕ ಚಿತ್ರಹಿಂಸೆಯಾದರೆ, ಮತ್ತೊಂದು ವೃತ್ತಿ ಜೀವನಕ್ಕೆ ಪೆಟ್ಟು! ಹೌದು, ಈ ಪ್ರಕರಣದಿಂದ ಶ್ರುತಿ ಅವರಿಗೆ ಹಲವಾರು ಪ್ರಾಜೆಕ್ಟ್ ಗಳು ಕೈ ತಪ್ಪಿದವು, ಹೊಸ ಅವಕಾಶಗಳು ಕಮ್ಮಿ ಆಗಿವೆ. ಇಷ್ಟೆಲ್ಲದರ ಮಧ್ಯೆ ಶ್ರುತಿ ಜೀವನದಲ್ಲಿ ಒಂದು ಸಂತಸದ ಘಟನೆ ಸಂಭವಿಸಿದೆ. ಅದೇನು ಅಂತೀರಾ? ಮುಂದೆ ಓದಿ…

ಶ್ರುತಿ ಹರಿಹರನ ಅವರ ರಂಪ ರಾಮಾಯಣದ ನಡುವೆ ಅವರು ಮದುವೆಯಾಗಿರುವ ವಿಷಯ ಹೊರಬಿದಿತ್ತು. ಆದರೆ ಅದೊಂದು ಗಾಳಿ ಸುದ್ದಿ ಇರಬಹುದು ಎಂದು ಜನ ನಿರ್ಲಕ್ಷಿಸಿದ್ದರು. ಆದರೆ ನೆನ್ನೆ ಇನ್ಸ್ಟಾಗ್ರಾಮ್ ನಲ್ಲಿ ಶ್ರುತಿ ಅವರು ತಾವು ಗರ್ಭಿಣಿಯಾಗಿರುವ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಶ್ರುತಿ ಅವರ ಪತಿಯ ಹೆಸರಿ ರಾಮ್ ಕಿಲಾರಿ. ಅವರು ಕೇರಳದಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದಾರೆ. ಕೇರಳದ ಪ್ರಸಿದ್ಧ ಕಲರಿ ಪಟ್ಟು ಕಲಾವಿದರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ರಾಮ್ ಹೆಸರು ಮಾಡಿದ್ದಾರೆ.

Related posts

ನ್ಯೂಸ್ ಪೇಪರ್ ಪ್ರಿಂಟ್ ಇರುವ ಫ್ಯಾಬ್ರಿಕ್ ಡ್ರೆಸ್ ಲ್ಲಿ ಕಿಟ್ಟಿ ಪಾರ್ಟಿಯರ ಫ್ಯಾಷನ್..!

surjith

ದರ್ಶನ್ ಬಗ್ಗೆ ಕಿಚ್ಚ ಶಾಕಿಂಗ್ ಹೇಳಿಕೆ…!

Deepak Chaubah

ಎಲ್ಲಿರುವೆ ಹರಿಯೇ’ ಕುರುಕ್ಷೇತ್ರದ 3ನೇ ಹಾಡು ರಿಲೀಸ್ !!

Kannada News