SportzGazette

ನಾವೇನು ಲೇಕಕ್ಕೆ ಇಲ್ಲ ಅವರ ಮುಂದೆ ಅನ್ನೋ ತರ ನೋಡುತ್ತಾರೆ…! : ಕಿಚ್ಚ ಸುದೀಪ್

ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಪೈಲ್ವಾನ್ ಚಿತ್ರ ಮುಂದಿನ ತಿಂಗಳು(ಆಗಸ್ಟ್) 9ರಂದು ಅದ್ದೂರಿಯಾಗಿ ದೇಶದಾದ್ಯಂತ ಬೆಳ್ಳಿ ತೆರೆಯ ಮೇಲೆ ಆರ್ಭಟಿಸಲು ಸಜ್ಜಾಗಿದೆ. ಗಜಕೇಸರಿ, ಹೆಬ್ಬುಲಿ ಖ್ಯಾತಿಯ ಎಂ. ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು ಅವರ ಪತ್ನಿ ಸ್ವಪ್ನ ಕೃಷ್ಣ ಬಂಡವಾಳ ಹೂಡಿದ್ದಾರೆ.

ಆಕಾಂಕ್ಷ ಸಿಂಗ್ ಪೈಲ್ವಾನ್ ನ ಜೋಡಿಯಾಗಿ ತೆರೆಯ ಮೇಲೆ ಗ್ಲಾಮರಸ್ ಆಗಿ ಮಿಂಚುವ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆರಂಭದಲ್ಲಿ ಬರೋಬ್ಬರಿ 9 ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ಹೂಡಿದ್ದ ಚಿತ್ರತಂಡ ನಂತರ 7 ಆನಂತರ 5 ಭಾಷೆಗಳಿಗೆ ಸೀಮಿತ ಪಡಿಸಿತು. ಫೂನ್ಕ್ , ರಕ್ತ ಚರಿತ್ರ, ಮಕ್ಕಿ, ಬಾಹುಬಲಿ, ಈಗ, ಪುಲಿ ಚಿತ್ರಗಳಲ್ಲಿ ಅಭಿನಯಿಸಿರುವ ಕಿಚ್ಚ, ಬಾಲಿವುಡ್ , ತೆಲುಗು, ತಮಿಳ್, ಮಲಯಾಳಂ ಸಿನಿ ರಸಿಕರಲ್ಲೂ ಚಿರ ಪರಿಚಿತರು.

ಕಿಚ್ಚ ಸುದೀಪ್ ಅವರ ಆಪ್ತ ಅರ್ಜುನ್ ಜನ್ಯ ಅವರೇ ಈ ಚಿತ್ರಕ್ಕೂ ಸಂಗೀತ ಸಂಯೋಜಿಸಿದ್ದು, ಈಗಾಗಲೇ ಎರಡು ಹಾಡುಗಳು ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿ ಧೂಳ್ ಎಬ್ಬರಿಸಿದೆ. ಚಿತ್ರ ತಂಡವು ಈಗ ಪ್ರಚಾರದಲ್ಲಿ ಬ್ಯುಸಿ ಆಗಿದೆ. ಸುದೀಪ್ ಅವರು ಪೈಲ್ವಾನ್ ಚಿತ್ರದ ಪ್ರಚಾರಕ್ಕಾಗಿ ಹಲವಾರು ಸಂದರ್ಶನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇದೆ ರೀತಿ ಒಂದು ಸಂದರ್ಶನದಲ್ಲಿ ನಿರೂಪಕರು ” ನಿಮಗೆ ಹಾರುವ ಶಕ್ತಿ ಏನಾದರು ದಕ್ಕಿದರೆ ನೀವು ಮೊದಲು ಏನು ಮಾಡುತ್ತೀರಾ?” ಎಂದು ಕೇಳಿದರು. ಅದಕ್ಕೆ ಕಿಚ್ಚ ಮೊದಲು ನನ್ನ ಮಗಳನ್ನು ಬುಜದ ಮೇಲೆ ಕೂರಿಸಿಕೊಂಡು ಎಲ್ಲೆಡೆ ಸುತ್ತಾಡಿಸುತ್ತೇನೆ. ಆಗಲಾದರೂ ಅವೆಂಜರ್ಸ್ ಅವರಂತೆ ನಮನ್ನು ಸಹ ಇಷ್ಟ ಪಡಬಹುದು. ಅವರ ಮುಂದೆ ನಾವು ಏನು ಇಲ ಎಂಬಂತೆ ನೋಡುತ್ತಾರೆ ಎಂದು ಹಾಸ್ಯಾಸ್ಪದವಾಗಿ ಕಿಚ್ಚ ನಗು ಚಟಾಕಿಯೊಂದನ್ನು ಹಾರಿಸಿದರು.

ಬರೋಬ್ಬರಿ 50 ಕೋತಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಸುನಿಲ್ ಶೆಟ್ಟಿ, ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್, ಅವಿನಾಶ್, ಶರತ್ ಲೋಹಿತಾಶ್ವ ರಂತಹ ದೊಡ್ಡ ತಾರಾಬಳಗವನ್ನೇ ಹೊಂದಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Related posts

ಶ್ರುತಿ ಹರಿಹರನ್ ಗರ್ಭಿಣಿ! ಇನ್ಸ್ಟಾಗ್ರಾಮ್ ನಲ್ಲಿ ಸಂತಸ ಹಂಚಿಕೊಂಡ ನಟಿ !

surjith

‘ಮುನಿರತ್ನ ಕುರುಕ್ಷೇತ್ರ’ದ ಪಂಚ ಪಾಂಡವರು ಯಾರು ಗೊತ್ತಾ…?

Kannada News

ನ್ಯೂಸ್ ಪೇಪರ್ ಪ್ರಿಂಟ್ ಇರುವ ಫ್ಯಾಬ್ರಿಕ್ ಡ್ರೆಸ್ ಲ್ಲಿ ಕಿಟ್ಟಿ ಪಾರ್ಟಿಯರ ಫ್ಯಾಷನ್..!

surjith