SportzGazette

ರಾಜಧಾನಿ, ಶತಾಬ್ದಿ ಎಕ್ಸ್‌ಪ್ರೆಸ್‌ಗಳನ್ನೂ ಹಿಮ್ಮೆಟ್ಟಿ ಸಮಯಪಾಲನೆಯಲ್ಲಿ ತನ್ನ ಬದ್ಧತೆ ಮುಂದುವರೆಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌

ಭಾರತೀಯ ರೈಲ್ವೇಗೆ ಹೊಸ ’ವೇಗ’ ನೀಡಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಸಮಯಪಾಲನೆಯನ್ನು ತನ್ನ ಬದ್ಧತೆ ಮುಂದುವರೆಸಿದ್ದು ದೇಶದ ಮತ್ತೆರಡು ಪ್ರತಿಷ್ಠಿತ ರೈಲುಗಳಾದ ರಾಜಧಾನಿ ಹಾಗೂ ಶತಾಬ್ಧಿ ಎಕ್ಸ್‌ಪ್ರೆಸ್‌ಗಳನ್ನೂ ಹಿಮ್ಮೆಟ್ಟಿದೆ.

ದೆಹಲಿ-ವಾರಾಣಸಿ ನಡುವೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಫೆಬ್ರವರಿ 15ರಂದು ತನ್ನ ಪ್ರಾರಂಭಿಕ ಸಂಚಾರದಿಂದ ಇಲ್ಲಿಯವರೆಗೂ, ದೆಹಲಿ-ಕಾನ್ಪುರ ನಡುವಿನ ಪ್ರಯಾಣದ ಘಟ್ಟದಲ್ಲಿ ಸಮಯಪಾಲನೆಯಲ್ಲಿ 94% ಬದ್ಧತೆ ತೋರಿದೆ. ಇದೇ ದೆಹಲಿ-ಕಾನ್ಪುರ ಮಾರ್ಗದಲ್ಲಿ 91.18% ಬದ್ಧತೆ ಕಾಪಾಡಿಕೊಂಡಿರುವ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್‌ ಎರಡನೇ ಸ್ಥಾನದಲ್ಲಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ತನ್ನ ಸಂಚಾರದಲ್ಲಿ 100% ಸಮಯ ಪಾಲನಾ ಬದ್ಧತೆ ಕಾಪಾಡಿಕೊಂಡಿದ್ದ ಕುರಿತ ವರದಿಗಳು ಏಪ್ರಿಲ್‌ನಲ್ಲಿ ಬಂದಿದ್ದವು. ತನ್ನ ಪ್ರಯಾಣದ 80%ಗಿಂತ ಹೆಚ್ಚಿನ ದಿನಗಳಲ್ಲಿ, ದೆಹಲಿ-ಪ್ರಯಾಗ್‌ರಾಜ್‌ ನಡುವಿನ ಮಾರ್ಗದಲ್ಲಿ ಇದೇ ರೈಲು ನಿಗದಿತ ಸಮಯಕ್ಕಿಂತ ಕೊಂಚ ಮುನ್ನವೇ ಸಾಗಿದ ದಾಖಲೆ ಇದೆ.

ಇದೇ ಮಾರ್ಗದಲ್ಲಿ 84.62 % ಬದ್ಧತೆ ಇರುವ ರಾಂಚಿ ರಾಜಧಾನಿ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದೆ.

Related posts

ಕಾಲೇಜುಗಳಲ್ಲಿ, ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ

Deepak Chaubah