SportzGazette

ಬಾಟಲ್ ಕ್ಯಾಪ್ ಓಫನ್​​ ಚಾಲೆಂಜ್ ಯುವರಾಜ್​ ಭರ್ಜರಿ ಆನ್ಸರ್​! ಸಿಂಗ್​ ಯಾರ ಯಾರಿಗೆ ಚಾಲೆಂಜ್​ ಹಾಕಿದ್ರು ಗೊತ್ತಾ?

ಸಾಮಾಜಿಕ ಮಾಧ್ಯಮಗಳಲ್ಲಿ ಸೆಲೆಬ್ರಿಟಿಗಳು ಒಂದಲ್ಲಾ ಒಂದು ಚಾಲೆಂಜ್‍ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಕನ್ನಡ ಚಿತ್ರರಂಗದ ನಟ ಅರ್ಜುನ್‍ ಸರ್ಜಾ ಅವರು ಬಾಟಲ್‍ ಕ್ಯಾಪ್‍ ಓಪನ್‍ ಚಾಲೆಂಜ್‍ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಅದಕ್ಕೂ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಚಾಲೆಂಜ್‍ ವೈರಲ್‍ ಆಗಿತ್ತು.

ಆದರೆ ಕ್ರಿಕೆಟಿಗ ಯುವರಾಜ್‍ ಸಿಂಗ್‍ ಅವರು ಈ ಚಾಲೆಂಜ್‍ ಗೆ ಭರ್ಜರಿಯಾಗಿ ಆನ್ಸರ್ ಮಾಡಿದ್ದಾರೆ. ಅಲ್ಲದೇ, ಸಿಂಗ್‍ ಅವರು ಯಾರಿಗೆ ಚಾಲೆಂಜ್​ ಹಾಕಿದ್ದಾರೆ ಗೊತ್ತಾ?

ಯುವಿ ಕೂಡ ಬಾಟಲಿ ಓಪನ್‍ ಚಾಲೆಂಜ್‍ ತೆಗೆದುಕೊಂಡಿದ್ದಾರೆ. ಆದರೆ ಯುವಿದು ಮಾತ್ರ ಡಿಫರೆಂಟ್‍ ಸ್ಟೈಲ್‍. ಕಾಲಿನಿಂದ ಬಾಟಲಿಯ ಮುಚ್ಚಳ ಬೀಳಿಸಿಲ್ಲ. ಬದಲಾಗಿ ಕ್ರಿಕೆಟ್​ ಬ್ಯಾಟ್ ಹಿಡಿದು ಚೆಂಡಿಗೆ ಸ್ಟ್ರೇಟ್​ ಡ್ರೈವ್ ಶಾಟ್ ಹೊಡಿದಿದ್ದಾರೆ. ಆ ಚೆಂಡು ನೇರವಾಗಿ ಬಾಟಲಿಗೆ ತಗುಲಿ ಕ್ಯಾಪ್​ ಸಮೇತ ಬಾಟಲಿ ಕೆಳಗೆ ಬಿದ್ದಿದೆ.

ಬಾಟಲ್ ಕ್ಯಾಪ್ ಒಪನ್‍ ಚಾಲೆಂಜ್ ಅನ್ನು ಮಾಡಿ ಅಂತ ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಶಿಖರ್ ಧವನ್ ಹಾಗೂ ಕ್ರಿಸ್​ ಗೇಲ್​ಗೆ ಯುವಿ ಟ್ಯಾಗ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಬಾಟೆಲ್‍ ಕ್ಯಾಪ್‍ ಚಾಲೆಂಜ್‍ ಅನ್ನು ಸೆಲೆಬ್ರೆಟಿಗಳು ಕೂಡ ಸ್ವೀಕರಿಸಿಲು ಮುಂದಾಗುತ್ತಿದ್ದಾರೆ. ಇತ್ತ ಸ್ಯಾಂಡಲ್‍ವುಡ್‍ನಲ್ಲಿ ಪುನೀತ್‌ ರಾಜ್‌ಕುಮಾರ್‌, ಗಣೇಶ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ಗುಳಿಕೆನ್ನೆ ಹುಡುಗಿ ರಚಿತಾ ರಾಮ್ ಹಾಗೂ ಬಾಲಿವುಡ್​ ನಟಿ ಸುಶ್ಮಿತಾ ಸೇನ್, ಪರಿಣಿತಿ ಚೋಪ್ರಾ​​​ ಕೂಡ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ. ಅಲ್ಲದೇ ತಾವು ಬಾಟಲ್‍ ಕ್ಯಾಪ್‍ ಓಪನ್‍ ಮಾಡಿದ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿ ಅಭಿಮಾನಿಗಳಿಗೆ ಮುದ ನೀಡಿದ್ದಾರೆ. ಇವರ ಜೊತೆಗೆ ಸಾಮಾನ್ಯ ಜನರೂ ಈ ಚಾಲೆಂಜನ್ನು ಸ್ವೀಕರಿಸಿ ಯಶಸ್ವಿಯಾಗಿರುವುದು ಮತ್ತೊಂದು ವಿಶೇಷ.